ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಜಿಲ್ಲಾ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ (Dakshina Kannada District Court Recruitment 2023) ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಸಂಪೂರ್ಣ ವಿವರ ಕೇಳಗಿದೆ.
ಸಂಕ್ಷಿಪ್ತ ವಿವರಣೆ: ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಜಿಲ್ಲಾ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯನ್ನು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದ ಅಧೀಕೃತ ವೆಬ್ ಸೈಟ್ ಮುಖಾಂತರ ಸಲ್ಲಿಸಬೇಕು. ಅರ್ಜಿ ಸಂಬಂಧಿಸಿದ ಅಧೀಕೃತ ವೆಬ್ ಸೈಟ್, ಅಧಿಸೂಚನೆ, ವೇತನ, ವಯೋಮಿತಿ ಮತ್ತು ಪ್ರಮುಖ ಲೀಕ್, ದಿನಾಂಕ, ವಿದ್ಯಾರ್ಹತೆ ಸಂಪೂರ್ಣ ವಿವರಗಳು ಈ ಲೇಖಕದಲ್ಲಿ ನೋಡಬಹುದು.
Dakshina Kannada District Court Recruitment 2023 ಹುದ್ದೆ ವಿವರ:
ನೇಮಕಾತಿ ಸಂಸ್ಥೆ: ದಕ್ಷಿಣ ಕನ್ನಡ ಜಿಲ್ಲಾ ಅಧೀನ ಮತ್ತು ಸತ್ರ ನ್ಯಾಯಾಲಯ
ಹುದ್ದೆ ಹೆಸರು: ವಿವಿಧ ಹುದ್ದೆಗಳು
ಖಾಲಿ ಹುದ್ದೆಗಳ ಸಂಖ್ಯೆ: 54
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್ ಮುಖಾಂತರ
ಉದ್ಯೋಗ ಸ್ಥಳ : ದಕ್ಷಿಣ ಕನ್ನಡ ಜಿಲ್ಲೆ (ಮಂಗಳೂರು)
ಹುದ್ದೆಗಳ ಸಂಪೂರ್ಣ ಮಾಹಿತಿ:
ಶೀಘ್ರ ಲಿಪಿಗಾರರು (Stenographer Grade 3) -10
ಬೆರಳಚ್ಚುಗಾರರು (Typists) – 6
ಬೆರಳಚ್ಚು ನಕಲುಗಾರರು (Typist- Copyists) – 2
ಜವಾನ (Peons) – 36
ಶೈಕ್ಷಣಿಕ ವಿದ್ಯಾರ್ಹತೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ಶೈಕ್ಷಣಿಕ ವಿದ್ಯಾರ್ಹತೆ ಗಳನ್ನು ಹೊಂದಿರಬೇಕು.
ಶೀಘ್ರ ಲಿಪಿಗಾರರು (Stenographer) : 12ನೇ ತರಗತಿ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಶೀಘ್ರ ಲಿಪಿಯಲ್ಲಿ ಹಿರಿಯ ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಮತ್ತು ಕನ್ನಡ ಹಾಗೂ ಆಂಗ್ಲ ಭಾಷೆಯ ಬೆರಳಚ್ಚು ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಬೆರಳಚ್ಚುಗಾರರು (Typists) : ಅಭ್ಯರ್ಥಿಯು ದ್ವಿತೀಯ ಪಿಯುಸಿ ಜೊತೆಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ (Senior Grade) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಬೆರಳಚ್ಚು ನಕಲುಗಾರರು (Typist- Copyists) : ದ್ವಿತೀಯ ಪಿಯುಸಿ ಜೊತೆಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಕಿರಿಯ ದರ್ಜೆ (Junior Grade) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಜವಾನ (Peons) : 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬರಬೇಕು.
ಮಾಸಿಕ ವೇತನ : ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ಹುದ್ದೆಗೆ ಅನುಗುಣವಾಗಿದೆ.
- ಶೀಘ್ರ ಲಿಪಿಗಾರರು (Stenographer Grade 3) ₹27,650 ರಿಂದ 52,650 ರೂ
- ಬೆರಳಚ್ಚುಗಾರರು (Typists) 21,400 ರಿಂದ 42,000
- ಬೆರಳಚ್ಚು ನಕಲುಗಾರರು (Typist- Copyists) ₹21,400 ರಿಂದ ₹42,000
- ಜವಾನ (Peons) ₹17,000 ರಿಂದ ₹28,950
Dakshina Kannada District Court Recruitment 2023ಆಯ್ಕೆ ವಿಧಾನ?
ಶೀಘ್ರ ಲಿಪಿಗಾರರು, ಬೆರಳಚ್ಚುಗಾರರು ಮತ್ತು ಬೆರಳಚ್ಚು ನಕಲುಗಾರರು ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಉಕ್ತಲೇಖಕವನ್ನು ಕೊಟ್ಟು ಬೆರಳಚ್ಚು ಯಂತ್ರ/ಕಂಪ್ಯೂಟರ್‌ನಲ್ಲಿ ಬೆರಳಚ್ಚು ಮಾಡಿಸಿ ಅರ್ಹತಾ ಪರೀಕ್ಷೆ ನಡೆಸಲಾಗುವುದು. ಜವಾನ ಹುದ್ದೆಗೆ ಅಭ್ಯರ್ಥಿ 10ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ: ಅರ್ಜಿ ಸಲ್ಲಿಸಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮತ್ತು ಎಲ್ಲಾ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ. ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹200 ಪಾವತಿಸಬೇಕು.
Dakshina Kannada District Court Recruitment 2023ಅಭ್ಯರ್ಥಿಗಳ ವಯೋಮಿತಿ
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ
SC/ST & Cat-I ಅಭ್ಯರ್ಥಿಗಳಿ -05 ವರ್ಷ
OBC ಅಭ್ಯರ್ಥಿಗಳಿಗೆ – 03 ವರ್ಷ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 06-11-2023
ಅರ್ಜಿ ಸಲ್ಲಿಸಲು ಕಡೆಯ ದಿನಾಂಕಃ: 05-12-2023
ಶುಲ್ಕ ಪಾವತಿಸಲು ಕಡೆಯ ದಿನಾಂಕ: 06-12-2023
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್’ಗಳು
ಅಧಿಕೃತ ವೆಬ್ ಸೈಟ್ : ಕ್ಲಿಕ್ ಮಾಡಿ