PUC ಪಾಸಾದವರಿಗೆ ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗ | Koppal Gram Panchayat Recruitment 2024

ಕೊಪ್ಪಳ ಜಿಲ್ಲಾ (Koppal Gram Panchayat Recruitment 2024) ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರು ಕೊನೆಯ ದಿನಾಂಕದೊಳಗೆ ಅಪ್ಲೈ ಮಾಡಬಹುದು.

WhatsApp Group Join Now
Telegram Group Join Now

ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಕೊಪ್ಪಳ ಜಿಲ್ಲಾ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ (Koppal District Gram Panchayat) ಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ, ಸಂಪೂರ್ಣ ಓದಿ ಅಪ್ಲೈ ಮಾಡಬಹುದು.

Koppal Gram Panchayat Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಪ್ರಾಧಿಕಾರ: ಕೊಪ್ಪಳ ಜಿಲ್ಲಾ ಪಂಚಾಯತ್
ಹುದ್ದೆ ಹೆಸರು: ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ
ಹುದ್ದೆಗಳ ಸಂಖ್ಯೆ: 21
ಉದ್ಯೋಗ ಸ್ಥಳ: ಕೊಪ್ಪಳ (ಕರ್ನಾಟಕ)
ವೇತನ: 15196.72 ರೂ.
ಅರ್ಜಿ ಸಲ್ಲಿಸುವ ವಿಧಾನ:

ಶೈಕ್ಷಣಿಕ ವಿದ್ಯಾರ್ಹತೆ :
ಕೊಪ್ಪಳ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಅಭ್ಯರ್ಥಿಯು ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ನಲ್ಲಿ ಪ್ರಮಾಣ ಪತ್ರ ಪಡೆದಿರಬೇಕು.

ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ ಅಧಿಸೂಚನೆ 2024

ವಯೋಮಿತಿ :
ಕೊಪ್ಪಳ ಗ್ರಾಮ ಪಂಚಾಯತ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷ
ಕ್ಯಾಟ್-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ: 03 ವರ್ಷ
PWD/ವಿಧವೆ ಅಭ್ಯರ್ಥಿಗಳಿಗೆ: 10 ವರ್ಷ

ಆಯ್ಕೆ ವಿಧಾನ:
ಮೆರಿಟ್ ಪಟ್ಟಿ ಆಧಾರದ ಮೇಲೆ.

ಅರ್ಜಿ ಸಲ್ಲಿಸುವ ವಿಳಾಸ:
ಆಸಕ್ತ ಅಭ್ಯರ್ಥಿಗಳು ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್, ಜಿಲ್ಲಾ ಆಡಳಿತ ಭವನ, ಹೊಸಪೇಟೆ ರೋಡ್, ಕೊಪ್ಪಳ. ಕರ್ನಾಟಕ
ಈ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಅಥವಾ ಯಾವುದೇ ಇತರ ಸೇವೆಗಳ ಮೂಲಕ ಕೊನೆಯ ದಿನಾಂಕದೊಳಗೆ ಕಳುಹಿಸಬೇಕು.

ಅರ್ಜಿ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮಾರ್ಚ್- 04- 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್- 03- 2024

Koppal Gram Panchayat Recruitment 2024 ಅಧಿಸೂಚನೆ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್‌:koppal.nic.in

WhatsApp Group Join Now
Telegram Group Join Now

Leave a Comment