ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF Recruitment 2024) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರು ಕೊನೆಯ ದಿನಾಂಕದೊಳಗೆ ಅಪ್ಲೈ ಮಾಡಬಹುದು.
ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ನಲ್ಲಿ ಖಾಲಿ ಇರುವ ಸಹಾಯಕ ಸಬ್ ಇನ್ಸ್ಪೆಕ್ಟರ್ (ಕಾರ್ಯನಿರ್ವಾಹಕ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅಪ್ಲೈ ಮಾಡಿ.
CISF Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:
ನೇಮಕಾತಿ ಪ್ರಾಧಿಕಾರ: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF)
ಹುದ್ದೆಯ ಹೆಸರು: ಸಹಾಯಕ ಸಬ್ ಇನ್ಸ್ಪೆಕ್ಟರ್ (ಕಾರ್ಯನಿರ್ವಾಹಕ)
ಹುದ್ದೆಗಳ ಸಂಖ್ಯೆ: 836
ಉದ್ಯೋಗ ಸ್ಥಳ: ಭಾರತದಾದ್ಯಂತ
ವಿದ್ಯಾರ್ಹತೆ ವಿವರ:
CISF ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು.
ವಯೋಮಿತಿ:
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಟ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳಿಗೆ: 05 ವರ್ಷ
ವೇತನ:
CISF ನೇಮಕಾತಿ ನಿಯಮಗಳ ಪ್ರಕಾರ ಅನ್ವಯ
ಆಯ್ಕೆ ವಿಧಾನ:
ಸೇವಾ ದಾಖಲೆಗಳ ಪರಿಶೀಲನೆ
ಲಿಖಿತ ಪರೀಕ್ಷೆ
ದೈಹಿಕ ಮಾನದಂಡಗಳ ಪರೀಕ್ಷೆ
ದೈಹಿಕ ದಕ್ಷತೆಯ ಪರೀಕ್ಷೆ
ವೈದ್ಯಕೀಯ ಪರೀಕ್ಷೆ
ಸಂದರ್ಶನ, ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು cisf.gov.in ಅಧಿಕೃತ ವೆಬ್ಸೈಟ್ಗೆ ಭೇಟಿನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ನಮೂನೆಯ ಹಾರ್ಡ್ ನಕಲನ್ನು ಸಂಬಂಧಿತ ಸ್ವಯಂ- ದೃಢೀಕೃತ ದಾಖಲೆಗಳೊಂದಿಗೆ 25-ಫೆಬ್ರವರಿ-2024 ರಂದು ಅಥವಾ ಮೊದಲು ಸಂಬಂಧಪಟ್ಟ CISF ಘಟಕಗಳಿಗೆ, ದಾಖಲೆಗಳನ್ನು ಸ್ಪೀಡ್ ಪೋಸ್ಟ್, ಅಂಚೆ ಅಥವಾ ಇತರೆ ಸೇವೆಗಳ ಮೂಲಕ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20-01-2024
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-ಫೆಬ್ರವರಿ-2024
ಅರ್ಜಿ ಹಾರ್ಡ್ ಪ್ರತಿಯನ್ನು ಕಳುಹಿಸಲು ಕೊನೆಯ ದಿನಾಂಕ: 25-ಫೆಬ್ರವರಿ-2024
ಅರ್ಜಿ ನಮೂನೆಯ ಹಾರ್ಡ್ ಕಾಪಿಗಳ ಪರಿಶೀಲನೆಯ ದಿನಾಂಕ: 10-ಮಾರ್ಚ್-2024
ಆನ್ಲೈನ್ ಅರ್ಜಿ ನಮೂನೆ, ಅನುಬಂಧಗಳು ಮತ್ತು ಅವುಗಳ ಹಾರ್ಡ್ ಪ್ರತಿಗಳ ಪರಿಶೀಲನೆಯ ದಿನಾಂಕ: 31-ಮಾರ್ಚ್-2024
MS-Excel ಫಾರ್ಮ್ಯಾಟ್ನಲ್ಲಿ ಸ್ವೀಕರಿಸಿದ/ತಿರಸ್ಕೃತ ಅಭ್ಯರ್ಥಿಗಳ ಡೇಟಾವನ್ನು FHQ (Rectt. ಶಾಖೆ) ಗೆ ಸಲ್ಲಿಸಿದ ದಿನಾಂಕ: 05-Apr-2024
CISF Recruitment 2024 ಅಧಿಸೂಚನೆ ಲಿಂಕ್ಗಳು:
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಡೌನ್ಲೋಡ್
ಆನ್ಲೈನ್ ಅರ್ಜಿ ಸಲ್ಲಿಸಲು: ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: cisf.gov.in