Mandya DCC Bank Recruitment 2024 : ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಮಂಡ್ಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ, ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಮಂಡ್ಯ (Mandya DCC Bank) ದಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್, ಅಟೆಂಡರ್. ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.
Mandya DCC Bank Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:
ನೇಮಕಾತಿ ಪ್ರಾಧಿಕಾರ: ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ( DCC Bank Mandya)
ಹುದ್ದೆ ಹೆಸರು: ಜೂನಿಯರ್ ಅಸಿಸ್ಟೆಂಟ್, ಅಟೆಂಡರ್.
ಹುದ್ದೆಗಳ ಸಂಖ್ಯೆ: 94
ಉದ್ಯೋಗ ಸ್ಥಳ: ಮಂಡ್ಯ (ಕರ್ನಾಟಕ)
ವೇತನ: 23500-83900 ರೂ.
ಅಧಿಕೃತ ವೆಬ್ಸೈಟ್: mandyadccbank.com
ಹುದ್ದೆಗಳ ವಿವರ:
ಮಾಹಿತಿ ತಂತ್ರಜ್ಞಾನ ಮುಖ್ಯ ವ್ಯವಸ್ಥಾಪಕರು, ಗ್ರೇಡ್-1 : 01
ಕಿರಿಯ ಸಹಾಯಕರು (Junior Assistant) : 70
ವಾಹನ ಚಾಲಕರು, (Drivers) : 02
ಅಟೆಂಡರ್ (Attender) : 21
ಶೈಕ್ಷಣಿಕ ಅರ್ಹತೆ:
ಮಾಹಿತಿ ತಂತ್ರಜ್ಞಾನ ಮುಖ್ಯ ವ್ಯವಸ್ಥಾಪಕರು, ಗ್ರೇಡ್-1 M.Tech
ಕಿರಿಯ ಸಹಾಯಕರು : PUC
ವಾಹನ ಚಾಲಕರು: SSLC + Driving License
ಅಟೆಂಡರ್ (Attender): 10th
ವಯಸ್ಸಿನ ಮಿತಿ:
ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಪ್ರವರ್ಗ 2ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ: 03 ವರ್ಷ
SC/ST/ಪ್ರವರ್ಗ1 ಅಭ್ಯರ್ಥಿಗಳಿಗೆ: 05 ವರ್ಷ
ಹುದ್ದೆವಾರು ವೇತನ ಶ್ರೇಣಿ:
ಮಾಹಿತಿ ತಂತ್ರಜ್ಞಾನ ಮುಖ್ಯ ವ್ಯವಸ್ಥಾಪಕರು, ಗ್ರೇಡ್-1: 43100 – 83900 ರೂ.
ಕಿರಿಯ ಸಹಾಯಕರು: 30350 – 58250 ರೂ.
ವಾಹನ ಚಾಲಕರು : 27650-52650 ರೂ.
ಅಟೆಂಡರ್ : 23500-47650 ರೂ.
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಿಗೆ – 1500 ರೂ.
SC/ ST, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ- 750 ರೂ.
ಶುಲ್ಕ ಪಾವತಿಸುವ ವಿಧಾನ: ಆನ್ಲೈನ್
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ
ಸಂದರ್ಶನ
Mandya DCC Bank Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 18-01-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 16-02-2024
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ – 16-02-2024
ಅಧಿಸೂಚನೆ ಪ್ರಮುಖ ಲಿಂಕ್ಗಳು:
ಜೂನಿಯರ್ ಅಸಿಸ್ಟೆಂಟ್, ಅಟೆಂಡರ್ ಅಧಿಕೃತ ಅಧಿಸೂಚನೆ: ಡೌನ್ಲೋಡ್
ಮಾಹಿತಿ ತಂತ್ರಜ್ಞಾನ ಮುಖ್ಯ ವ್ಯವಸ್ಥಾಪಕ ಅಧಿಕೃತ ಅಧಿಸೂಚನೆ: ಡೌನ್ಲೋಡ್
ಜೂನಿಯರ್ ಅಸಿಸ್ಟೆಂಟ್, ಅಟೆಂಡರ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಮಾಹಿತಿ ತಂತ್ರಜ್ಞಾನ ಮುಖ್ಯ ವ್ಯವಸ್ಥಾಪಕ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: mandyadccbank.com
ಗಮನಿಸಿ: ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ, ಸಹಾಯವಾಣಿ ಸಂಖ್ಯೆ: 9108538218 ಅನ್ನು ಸಂಪರ್ಕಿಸಿ.
2nd PU complete
Hi