ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, (WCD Karnataka Recruitment 2024 ) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಪ್ಲೈ ಮಾಡಬಹುದು.
ರಾಜ್ಯ ಸರ್ಕಾರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಕರ್ನಾಟಕ ರಾಜ್ಯ ಮಹಿಳಾ ಸಬಲೀಕರಣ (WCD Karnataka) ಘಟಕದಲ್ಲಿ ಖಾಲಿ ಇರುವ ಖಾತೆ ಸಹಾಯಕ, ರಾಜ್ಯ ಮಿಷನ್ ಸಂಯೋಜಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ
WCD Karnataka Recruitment 2024 ಅಧಿಸೂಚನೆ ಸಂಕ್ಷಿಪ್ತ ಪರಿಚಯ:
ನೇಮಕಾತಿ ಪ್ರಾಧಿಕಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಹುದ್ದೆ ಹೆಸರು: ಖಾತೆ ಸಹಾಯಕ, ರಾಜ್ಯ ಮಿಷನ್ ಸಂಯೋಜಕರು
ಹುದ್ದೆಗಳ ಸಂಖ್ಯೆ: 06
ಉದ್ಯೋಗ ಸ್ಥಳ: ಬೆಂಗಳೂರು (ಕರ್ನಾಟಕ)
ವೇತನ: 25000-60000 ರೂ.
ಹುದ್ದೆಗಳ ವಿವರ:
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ರಾಜ್ಯ ಮಿಷನ್ ಸಂಯೋಜಕ | 01 |
ಲಿಂಗ ತಜ್ಞರು | 01 |
ಪಿಎಂಎಂವಿವೈಯ್ ರಾಜ್ಯ ಸಂಯೋಜಕ | 01 |
ಸಂಶೋಧನೆ & ತರಬೇತಿ ತಜ್ಞ | 01 |
ಖಾತೆ ಸಹಾಯಕ | 01 |
ಕಂಪ್ಯೂಟರ್ ಜ್ಞಾನ ಹೊಂದಿರುವ ಕಚೇರಿ ಸಹಾಯಕ | 01 |
ಹುದ್ದೆವಾರು ವೇತನ ಶ್ರೇಣಿ:
ಹುದ್ದೆ ಹೆಸರು | ವೇತನ ಶ್ರೇಣಿ |
ರಾಜ್ಯ ಮಿಷನ್ ಸಂಯೋಜಕ | 60,000 ರೂ. |
ಲಿಂಗ ತಜ್ಞರು | 45,000 ರೂ. |
ಪಿಎಂಎಂವಿವೈಯ್ ರಾಜ್ಯ ಸಂಯೋಜಕ | 45,000 ರೂ. |
ಸಂಶೋಧನೆ & ತರಬೇತಿ ತಜ್ಞ | 35,000 ರೂ. |
ಖಾತೆ ಸಹಾಯಕ | 25,000 ರೂ. |
ಕಂಪ್ಯೂಟರ್ ಜ್ಞಾನ ಹೊಂದಿರುವ ಕಚೇರಿ ಸಹಾಯಕ | 25,000 ರೂ. |
ಶೈಕ್ಷಣಿಕ ಅರ್ಹತೆ:
- ರಾಜ್ಯ ಮಿಷನ್ ಸಂಯೋಜಕ: ಸಮಾಜ ವಿಜ್ಞಾನ/ಜೀವನ ವಿಜ್ಞಾನ/ಪೌಷ್ಟಿಕತೆ/ಔಷಧಿ/ಆರೋಗ್ಯ ನಿರ್ವಹಣೆ/ಸಾಮಾಜಿಕ ಕೆಲಸ/ಗ್ರಾಮೀಣ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರಬೇಕು.
- ಲಿಂಗ ತಜ್ಞರು: ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
- PMMVY-ರಾಜ್ಯ ಸಂಯೋಜಕರು: ಸಮಾಜ ವಿಜ್ಞಾನ/ಜೀವನ ವಿಜ್ಞಾನ/ಪೌಷ್ಟಿಕತೆ/ಔಷಧ/ಆರೋಗ್ಯ ನಿರ್ವಹಣೆ/ಸಾಮಾಜಿಕ ಕೆಲಸ/ಗ್ರಾಮೀಣ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
- ಸಂಶೋಧನೆ & ತರಬೇತಿ ತಜ್ಞ: ಸಮಾಜ ಕಾರ್ಯದಲ್ಲಿ ಪದವಿ ಹೊಂದಿರಬೇಕು.
- ಖಾತೆ ಸಹಾಯಕ: ಡಿಪ್ಲೊಮಾ ಇನ್ ಅಕೌಂಟ್ಸ್ ಪದವಿ ಹೊಂದಿರಬೇಕು.
- ಕಂಪ್ಯೂಟರ್ ಜ್ಞಾನ ಹೊಂದಿರುವ ಕಚೇರಿ ಸಹಾಯಕ: ಪದವಿ ಜೊತೆಗೆ ಡಿಪ್ಲೊಮಾ ಇನ್ ಕಂಪ್ಯೂಟರ್ಸ್/ ಐಟಿ.
ಅನುಭವ:
ಹುದ್ದೆಗೆ ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅಭ್ಯರ್ಥಿಯು 3 ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 45 ಮೀರಿರಬಾರದು.
ಅರ್ಜಿ ಸಲ್ಲಿಸುವ ವಿಳಾಸ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 3ನೇ ಮಹಡಿ, ಪಿಡಬ್ಲ್ಯೂಡಿ ಕಟ್ಟಡದ ಆವರಣ, ಆನಂದರಾವ್ ವೃತ್ತ, ಬೆಂಗಳೂರು – 560009 ಈ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಇತರೆ ಯಾವುದೇ ಸೇವೆಗಳ ಮೂಲಕ ಕಳುಹಿಸಬೇಕು.
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ವಿದ್ಯಾರ್ಹತೆ, ಅನುಭವ, ಲಿಖಿತ ಪರೀಕ್ಷೆ, ಸಂದರ್ಶನ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜನವರಿ 24, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 07, 2024
WCD Karnataka Recruitment 2024 ಪ್ರಮುಖ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: dwcd.karnataka.gov.in