ಸ್ಟಾಫ್ ಸೆಲೆಕ್ಷನ್ ಕಮಿಷನ್(SSC Recruitment 2024) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಪ್ಲೈ ಮಾಡಬಹುದು.
ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಸ್ಟಾಫ್ ಸೆಲೆಕ್ಷನ್ ಕಮಿಷನ್(Staff Selection Commission) ನಲ್ಲಿ ಖಾಲಿ ಇರುವ ಸಹಾಯಕ, ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತರು ಆನ್‌ಲೈನ್ (Online) ಅಥವಾ ಆಫ್ಲೈನ್ ಮೂಲಕ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.
SSC Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:
ನೇಮಕಾತಿ ಪ್ರಾಧಿಕಾರ: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
ಹುದ್ದೆಯ ಹೆಸರು: ಸಹಾಯಕ, ಕ್ಲರ್ಕ್
ಹುದ್ದೆಗಳ ಸಂಖ್ಯೆ: 121
ಉದ್ಯೋಗ ಸ್ಥಳ: ಭಾರತದಾದ್ಯಂತ
ವೇತನ: 19000- 81100 ರೂ.
ವಿದ್ಯಾರ್ಹತೆ:
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಪಿಯುಸಿ ಪೂರ್ಣಗೊಳಿಸಿರಬೇಕು.
ಹುದ್ದೆಗಳ ವಿವರಗಳು:
ಸೀನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್- 69
ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್- 52
ವಯೋಮಿತಿ:
ಸೀನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್- 50 ವರ್ಷ
ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್- 45 ವರ್ಷ
ವಯೋಮಿತಿ ಸಡಿಲಿಕೆ:
PWD ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PWD (SC/ST) ಅಭ್ಯರ್ಥಿಗಳಿಗೆ: 08 ವರ್ಷ
ವೇತನ:
ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್: 19,900-63,200 ರೂ.
ಸೀನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್: 25,500-81,100 ರೂ.
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್‌ಲೈನ್ & ಆಫ್ಲೈನ್ ಮೂಲಕ ಅಪ್ಲೈ ಮಾಡಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡುವ ಅಭ್ಯರ್ಥಿಗಳು ಕೆಳಗಿನ ಲಿಂಕ್ ಮೂಲಕ ಅಪ್ಲೈ ಮಾಡಬಹುದು. ಅಥವಾ ಆಫ್ಲೈನ್/ಪೋಸ್ಟ್ ಮೂಲಕ ಅಪ್ಲೈ ಮಾಡುವ ಅಭ್ಯರ್ಥಿಗಳು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಪ್ರಾದೇಶಿಕ ನಿರ್ದೇಶಕರು
ಸಿಬ್ಬಂದಿ ಆಯ್ಕೆ ಆಯೋಗ (ಉತ್ತರ ಪ್ರದೇಶ)
ಬ್ಲಾಕ್ ನಂ.12
ಸಿ.ಜಿ.ಓ. ಕಾಂಪ್ಲೆಕ್ಸ್
ಲೋಧಿ ರಸ್ತೆ
ನವದೆಹಲಿ-110003
ಈ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಪೋಸ್ಟ್, ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02-02-2024
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ -21-2024
SSC Recruitment 2024 ಪ್ರಮುಖ ಲಿಂಕ್‌ಗಳು
ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್/ಲೋವರ್ ಡಿವಿಷನ್ ಕ್ಲರ್ಕ್ ಅಧಿಸೂಚನೆ : ಡೌನ್‌ಲೋಡ್
ಹಿರಿಯ ಸೆಕ್ರೆಟರಿಯಟ್ ಸಹಾಯಕ/ಉನ್ನತ ವಿಭಾಗದ ಕ್ಲರ್ಕ್ ಅಧಿಸೂಚನೆ : ಡೌನ್‌ಲೋಡ್
ಆನ್‌ಲೈನ್ ಅರ್ಜಿ ಸಲ್ಲಿಸಲು: ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: ssc.nic.in