ಶಿವಮೊಗ್ಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ (Shivamogga Gram Panchayat Recruitment 2024) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರು ಅಪ್ಲೈ ಮಾಡಬಹುದು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಶಿವಮೊಗ್ಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತರು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅಪ್ಲೈ ಮಾಡಿ.
Shivamogga Gram Panchayat Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:
ನೇಮಕಾತಿ ಪ್ರಾಧಿಕಾರ: ಶಿವಮೊಗ್ಗ ಗ್ರಾಮ ಪಂಚಾಯತ್
ಹುದ್ದೆ ಹೆಸರು: ಗ್ರಂಥಾಲಯ ಮೇಲ್ವಿಚಾರಕರು
ಹುದ್ದೆಗಳ ಸಂಖ್ಯೆ: 14
ಉದ್ಯೋಗ ಸ್ಥಳ: ಶಿವಮೊಗ್ಗ (ಕರ್ನಾಟಕ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರುವರಿ -23-2024
ಶೈಕ್ಷಣಿಕ ವಿದ್ಯಾರ್ಹತೆ:
ಶಿವಮೊಗ್ಗ ಗ್ರಾಮ ಪಂಚಾಯತ್ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಅಭ್ಯರ್ಥಿಯು ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ನಲ್ಲಿ ಪ್ರಮಾಣ ಪತ್ರ ಪಡೆದಿರಬೇಕು ಹಾಗೂ ಕನಿಷ್ಠ 03 ತಿಂಗಳು ಕಂಪ್ಯೂಟರ್ ತರಬೇತಿ ಪಡೆದಿರಬೇಕು.
ವೇತನ :
ಆಯ್ಕೆಯಾದ ಅಭ್ಯರ್ಥಿಗಳಿಗೆ 15196.72 ರೂ. ಪ್ರತಿ ತಿಂಗಳು ವೇತನ ಪಡೆಯುತ್ತಾರೆ.
ವಯೋಮಿತಿ:
ಶಿವಮೊಗ್ಗ ಗ್ರಾಮ ಪಂಚಾಯತ್ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: 03 ವರ್ಷ
SC/ST/ ಪ್ರವರ್ಗ- 1 ಅಭ್ಯರ್ಥಿಗಳಿಗೆ: 05 ವರ್ಷ
PWD /ವಿಧವೆ ಅಭ್ಯರ್ಥಿಗಳಿಗೆ: 10 ವರ್ಷ
ಆಯ್ಕೆ ವಿಧಾನ:
ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಳಾಸ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂಬಂಧ ಪಟ್ಟ ಗ್ರಾಮ ಪಂಚಾಯತ್,ಶಿವಮೊಗ್ಗ, ಕರ್ನಾಟಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಈ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಇತರೆ ಯಾವುದೇ ಸೇವೆಗಳ ಮೂಲಕ ಕಳುಹಿಸಬೇಕು.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಫೆಬ್ರುವರಿ 05 – 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರುವರಿ 23 – 2024
Shivamogga Gram Panchayat Recruitment 2024 ಅಧಿಸೂಚನೆ ಲಿಂಕ್‌ಗಳು:
ಅಧಿಕೃತ ವೆಬ್‌ಸೈಟ್: shimoga.nic.in
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಅರ್ಜಿ ನಮೂನೆ: ಲಿಂಕ್ ಕ್ಲಿಕ್ ಮಾಡಿ