ಭಾರತೀಯ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (NHIDCL Recruitment 2024) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತರು ಕೊನೆಯ ದಿನಾಂಕದೊಳಗೆ ಅಪ್ಲೈ ಮಾಡಿ.
ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (NHIDCL Notification) ದಲ್ಲಿ ಖಾಲಿ ಇರುವ ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ಹಾಗೂ ಇತರೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಬಹುದು.
NHIDCL Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:
ನೇಮಕಾತಿ ಪ್ರಾಧಿಕಾರ: ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (NHIDCL)
ಹುದ್ದೆ ಹೆಸರು: ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್
ಹುದ್ದೆಗಳ ಸಂಖ್ಯೆ: 136
ಉದ್ಯೋಗ ಸ್ಥಳ: ಭಾರತದಾದ್ಯಂತ
ವೇತನ: 44900-215900 ರೂ.
ಹುದ್ದೆಗಳ ವಿವರಗಳು:
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ | ವೇತನ ಶ್ರೇಣಿ |
ಜನರಲ್ ಮ್ಯಾನೇಜರ್ (ಟಿ/ಪಿ) | 05 | 1,23,100 – 2,15,900 ರೂ. |
ಜನರಲ್ ಮ್ಯಾನೇಜರ್ (ಕಾನೂನು) | 01 | 1,23,100 – 2,15,900 ರೂ. |
ಉಪ ಪ್ರಧಾನ ವ್ಯವಸ್ಥಾಪಕರು (T/P) | 01 | 78,800 – 2,09,200 ರೂ. |
ಉಪ ಜನರಲ್ ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜಕ) | 12 | 78,800 – 2,09,200 ರೂ. |
ಮ್ಯಾನೇಜರ್ (T/P) | 20 | 67,700 – 2,08,700 ರೂ. |
ಮ್ಯಾನೇಜರ್ (ಕಾನೂನು) | 01 | 67,700 – 2,08,700 ರೂ. |
ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜನೆ) | 18 | 67,700 – 2,08,700 ರೂ. |
ಉಪ ವ್ಯವಸ್ಥಾಪಕರು (ಹಣಕಾಸು) | 04 | 56,100- 1,77,500 ರೂ. |
ಉಪ ವ್ಯವಸ್ಥಾಪಕರು (T/P) | 20 | 56,100- 1,77,500 ರೂ. |
ಮ್ಯಾನೇಜರ್ (HR/ ವಿಜಿಲೆನ್ಸ್) | 01 | 67,700 – 2,08,700 ರೂ. |
ಸಹಾಯಕ ವ್ಯವಸ್ಥಾಪಕರು (HR) | 03 | 47,600 -1,51,100 ರೂ. |
ಸಹಾಯಕ ವ್ಯವಸ್ಥಾಪಕ (ಹಣಕಾಸು) | 14 | 47,600 -1,51,100 ರೂ. |
ಜೂನಿಯರ್ ಮ್ಯಾನೇಜರ್ (ಹಣಕಾಸು) | 15 | 44,900 – 1,42,400 ರೂ. |
ಜೂನಿಯರ್ ಮ್ಯಾನೇಜರ್ (HR) | 04 | 44,900 – 1,42,400 ರೂ. |
ಪ್ರಧಾನ ಖಾಸಗಿ ಕಾರ್ಯದರ್ಶಿ (NHIDCL HQrs) | 01 | 67,700 – 2,08,700 ರೂ. |
ವೈಯಕ್ತಿಕ ಸಹಾಯಕ (NHIDCL HQrs ) | 07 | 44,900 – 1,42,400 ರೂ. |
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹುದ್ದೆವಾರು ವಿದ್ಯಾರ್ಹತೆ ವಿವರ:
ಹುದ್ದೆ ಹೆಸರು | ವಿದ್ಯಾರ್ಹತೆ |
ಜನರಲ್ ಮ್ಯಾನೇಜರ್ (T/P) | ಪದವಿ |
ಜನರಲ್ ಮ್ಯಾನೇಜರ್ (ಕಾನೂನು) | ಪದವಿ, LLB |
ಉಪ ಪ್ರಧಾನ ವ್ಯವಸ್ಥಾಪಕರು (T/P) | ಪದವಿ |
ಉಪ ವ್ಯವಸ್ಥಾಪಕರು (T/P) | ಪದವಿ, ಡಿಪ್ಲೊಮಾ |
ಉಪ ವ್ಯವಸ್ಥಾಪಕರು (ಹಣಕಾಸು) | ICAI ಅಥವಾ ICWAI, MBA |
ಸಹಾಯಕ ವ್ಯವಸ್ಥಾಪಕ (HR) | ಪದವಿ |
ಸಹಾಯಕ ವ್ಯವಸ್ಥಾಪಕ (ಹಣಕಾಸು) | ICAI ಅಥವಾ ICWAI, MBA |
ಮ್ಯಾನೇಜರ್ (HR/ ವಿಜಿಲೆನ್ಸ್) | ಪದವಿ |
ಮ್ಯಾನೇಜರ್ (ಕಾನೂನು) | ಪದವಿ, LLB |
ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜನೆ) | ಪದವಿ |
ಮ್ಯಾನೇಜರ್ (T/P) | ಪದವಿ |
ಉಪ ಜನರಲ್ ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜಕ) | ಪದವಿ |
ಜೂನಿಯರ್ ಮ್ಯಾನೇಜರ್ (ಹಣಕಾಸು) | ಪದವಿ, ICAI ಅಥವಾ ICWAI |
ಜೂನಿಯರ್ ಮ್ಯಾನೇಜರ್ (HR) | ಪದವಿ |
ಪ್ರಧಾನ ಖಾಸಗಿ ಕಾರ್ಯದರ್ಶಿ (NHIDCL HQrs) | ಪದವಿ |
ವೈಯಕ್ತಿಕ ಸಹಾಯಕ (NHIDCL HQrs) | ಪದವಿ |
ವಯೋಮಿತಿ:
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ಗರಿಷ್ಠ ವಯಸ್ಸು 56 ವರ್ಷ ಮೀರಿರಬಾರದು.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27-01-2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-ಫೆಬ್ರವರಿ-2024
NHIDCL Recruitment 2024 ಅಧಿಸೂಚನೆ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ : ಡೌನ್‌ಲೋಡ್
ಆನ್‌ಲೈನ್ ಅರ್ಜಿ ಸಲ್ಲಿಸಲು: ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: nhidcl.com