ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ (KUD Recruitment 2023) ದಲ್ಲಿ ಖಾಲಿ ಇರುವ ವಿವಿಧ ಕ್ಷೇತ್ರದ ಶಿಕ್ಷಕೇತರ ಬ್ಯಾಕ್‌ಲಾಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ವೇತನ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಕೆಳಗಿದೆ.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ (Karnataka University Dharwad) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಒಳಗೆ, ಅಭ್ಯರ್ಥಿಗಳು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.
KUD Recruitment 2023 ಅಧಿಸೂಚನೆ ಸಂಕ್ಷಿಪ್ತ ವಿವರ :
ಉದ್ಯೋಗ ಸಂಸ್ಥೆ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
ಹುದ್ದೆ ಹೆಸರು: ಎಲೆಕ್ಟ್ರಿಷಿಯನ್, ಪ್ರೂಫ್ ರೀಡರ್
ಒಟ್ಟು ಹುದ್ದೆ: 3
ವಿದ್ಯಾರ್ಹತೆ : 7ನೇ ತರಗತಿ 10ನೇ ತರಗತಿ, ಪದವಿ
ವೇತನ ಮಾಸಿಕ ₹ 27,650- 52,650
ಉದ್ಯೋಗದ ಸ್ಥಳ: ಧಾರವಾಡ
ಹುದ್ದೆ ಹೆಸರು & ಸಂಖ್ಯೆ:
- ಪ್ರೂಫ್ ರೀಡರ್- 1
- ಕಾರ್ಪೆಂಟರ್ & ಪೈಂಟರ್ ಹುದ್ದೆ- 1
- ಎಲೆಕ್ಟ್ರಿಷಿಯನ್ ಹುದ್ದೆ- 1
ವೇತನ ಶ್ರೇಣಿ:
ಪ್ರೂಫ್ ರೀಡರ್ ₹ 27,650- 52,650
ಕಾರ್ಪೆಂಟರ್ & ಪೈಂಟರ್ ಹುದ್ದೆ- ₹ 21,400-42,000
ಎಲೆಕ್ಟ್ರಿಷಿಯನ್- ₹ 23,500-47,650
ಹುದ್ದೆ ಮತ್ತು ವಿದ್ಯಾರ್ಹತೆ :
- ಪ್ರೂಫ್ ರೀಡರ್ :ಪದವಿ ಪಾಸ್ ಜತೆಗೆ ಪ್ರೂಫ್ ರೀಡರ್ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ಎಸ್‌ಎಸ್‌ಎಲ್‌ಸಿ ಯಲ್ಲಿ ಕನ್ನಡ ಭಾಷೆಯಲ್ಲಿ ಅಭ್ಯಾಸ ಮಾಡಿರಬೇಕು.
- ಕಾರ್ಪೆಂಟರ್ & ಪೈಂಟರ್ : 7ನೇ ತರಗತಿಯಲ್ಲಿ ಪಾಸ್ ಜೊತೆಗೆ ಡ್ರಾಯಿಂಗ್ ಕ್ರಾಪ್ಟಮನ್ ಶಿಫ್ಟ್‌ನಲ್ಲಿ ಪ್ರಮಾಣ ಪತ್ರ ಹೊಂದಿರಬೇಕು.
- ಎಲೆಕ್ಟ್ರಿಷಿಯನ್: 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು, ಜೊತೆಗೆ ಇಲೆಕ್ಟ್ರಿಕಲ್ ಸೂಪರ್‌ವೈಜರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 5 ವರ್ಷ ಕಾರ್ಯಾನುಭವ ಹೊಂದಿರಬೇಕು.
ವಯೋಮಿತಿ:
ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
ಹಣಕಾಸು ಅಧಿಕಾರಿ, ಕರ್ನಾಟಕ ವಿವಿ, ಧಾರವಾಡ ರವರ ಹೆಸರಿನಲ್ಲಿ ₹ 700 ಡಿಡಿ ತೆಗೆದು ಶುಲ್ಕ ಪಾವತಿಸಬೇಕು. ಶುಲ್ಕ ರಶೀದಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಆಯ್ಕೆ ಪ್ರಕ್ರಿಯೆ:
ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ , ಮೆರಿಟ್ ಲಿಸ್ಟ್‌ನಲ್ಲಿ ಮೀಸಲಾತಿ ಆಧಾರ ಮೇಲೆ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ.
KUD Recruitment 2023 ಅರ್ಜಿ ಸಲ್ಲಿಸುವ ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ತಮ್ಮ ಅಗತ್ಯ ದಾಖಲಾತಿಗಳೊಂದಿಗೆ, ಈ ವಿಳಾಸಕ್ಕೆ ಕುಲಪತಿಗಳು ಕರ್ನಾಟಕ ವಿಶ್ವವಿದ್ಯಾಲಯ ಪಾವಟೆ ನಗರ ಧಾರವಾಡ-580003 ಗೆ ನವೆಂಬರ್ 28 ರೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 0836-2215349 ಗೆ ಕರೆ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 28, 2023
ಪ್ರಮುಖ ಲಿಂಕ್‌ಗಳು
ಅರ್ಜಿ ಸಲ್ಲಿಸಲು: ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: kud.ac.in