ಕರ್ನಾಟಕ ರಾಜ್ಯ ಪೊಲೀಸ್ (KSP APC Hall Ticket 2024 Download) ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (CAR/DAR) ಹುದ್ದೆಗಳ ಲಿಖಿತ ಪರೀಕ್ಷೆಯ ಪ್ರವೇಶ ಪತ್ರ (Hall Ticket) ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕೆಳಗಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಕರ್ನಾಟಕ ರಾಜ್ಯ ಪೊಲೀಸ್ (KSP) ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (CAR/DAR) APC 3064 ಹುದ್ದೆಗಳ ಲಿಖಿತ ಪರೀಕ್ಷೆಯನ್ನು 28 ಜನವರಿ 2024 ರಂದು ರಾಜ್ಯಾದ್ಯಂತ ದಿನಾಂಕ ನಿಗದಿಪಡಿಸಲಾಗಿದೆ. ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ PC (CAR/DAR) ಪರೀಕ್ಷೆಯ Hall ticket ನ್ನು ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ತಮ್ಮ Application No. & Date of Birth ಹಾಕಿ ಇದೀಗ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
KSP APC Hall Ticket 2024 Download ನೇಮಕಾತಿ ಪ್ರಾಧಿಕಾರ
ಪರೀಕ್ಷೆಯ ಹೆಸರು: ಪೊಲೀಸ್ ಕಾನ್ಸ್‌ಟೇಬಲ್ PC (CAR/DAR)
ಪರೀಕ್ಷೆಯ ವಿಧಾನ ಆಫ್‌ಲೈನ್: OMS ಆಧಾರಿತ
ಪರೀಕ್ಷೆಯ ದಿನಾಂಕ : 28 ಜನವರಿ 2024 (ರವಿವಾರ)
ಪರೀಕ್ಷಾ ಸಮಯ : 11:00AM- 12:30PM
KSP ಹಾಲ್ ಟಿಕೆಟ್ ಪ್ರಕಟ ದಿನಾಂಕ: 25 ಜನವರಿ
ಒಟ್ಟು ಹುದ್ದೆಗಳ ಸಂಖ್ಯೆ : 3,064
ಅರ್ಜಿ ಸಲ್ಲಿಸಿದವರು : 3,18,000+
KSP ಹಾಲ್ ಟಿಕೆಟ್ (Hall ticket): ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: apc3064.ksp-recruitment.in
ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಖಾಲಿ ಇರುವ 3064 ಹುದ್ದೆಗಳನ್ನು ಭರ್ತಿ ಮಾಡಲು 2022 ರಲ್ಲಿ ಅಧಿಸೂಚನೆ ಹೊರಡಿಸಲಾಗಿದ. ಅಕ್ಟೋಬರ್‌ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಯಿತು ಮತ್ತು ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನವೆಂಬರ್ 2 ರೊಳಗೆ ಸಲ್ಲಿಸಲು ಅವಕಾಶ ನೀಡಲಾಯಿತು.