ಕರ್ನಾಟಕ ಹೈಕೋರ್ಟ್ ನೇಮಕಾತಿ 2023 | Karnataka High Court Recruitment 2023 @ karnatakajudiciary.kar.nic.in

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ (ಹೈಕೋರ್ಟ್) ದಲ್ಲಿ (Karnataka High Court Recruitment 2023) ಖಾಲಿ ಇರುವ ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ರಾಜ್ಯ ಹೈಕೋರ್ಟ್‌ ನಲ್ಲಿ ಖಾಲಿ ಇರುವ 14 ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ತಮ್ಮ ಅರ್ಜಿ ಸಲ್ಲಿಸಿ.

Karnataka High Court Recruitment 2023ಅಧಿಸೂಚನೆ ಸಂಕ್ಷಿಪ್ತ ವಿವರ

ಸಂಸ್ಥೆ ಹೆಸರು: ಕರ್ನಾಟಕ ಹೈಕೋರ್ಟ್​
ಹುದ್ದೆ ಹೆಸರು: ಜಿಲ್ಲಾ ನ್ಯಾಯಾಧೀಶ
ಖಾಲಿ ಹುದ್ದೆ ಸಂಖ್ಯೆ: ಒಟ್ಟು 14
ಮಾಸಿಕ ಸಂಬಳ: 1,44,840 ರಿಂದ 1,94,660 ರೂಪಾಯಿ
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ

ಹುದ್ದೆಯ ವಿದ್ಯಾರ್ಹತೆ:
ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಕಾನೂನಿನಲ್ಲಿ ಪದವಿ, LLB ಪೂರ್ಣಗೊಳಿಸಿರಬೇಕು.

10th & PUC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ

ವಯೋಮಿತಿ:
ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ವಯಸ್ಸು ನವೆಂಬರ್ 17ಕ್ಕೆ ಸರಿಯಾಗಿ ಗರಿಷ್ಠ 45 ವರ್ಷ ಮೀರಿರಬಾರದು.
SC/ST ಅಭ್ಯರ್ಥಿಗಳ ವಯೋಮಿತಿಯಲ್ಲಿ ಮೂರು ವರ್ಷ ಸಡಿಲಿಕೆ ನೀಡಲಾಗಿದೆ.

Karnataka High Court Recruitment 2023 ಪರೀಕ್ಷಾ ಶುಲ್ಕ:
ಪೂರ್ವಭಾವಿ ಪರೀಕ್ಷಾ ಶುಲ್ಕವು ಪರಿಶಿಷ್ಠ ಇತರ ಎಲ್ಲ ಅಭ್ಯರ್ಥಿಗಳಿಗೆ ₹1000 ವಿಧಿಸಲಾಗಿದೆ.
SC/ST/ Category-I ಅಭ್ಯರ್ಥಿಗೆ ತಲಾ ₹500
ಮುಖ್ಯ ಪರೀಕ್ಷಾ ಶುಲ್ಕ:
ಎಲ್ಲಾ ಇತರ ಅಭ್ಯರ್ಥಿಗಳು: ₹1500
SC/ST/Category-I ಅಭ್ಯರ್ಥಿಗಳು: ₹750

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಕೊನೆ ದಿನ: 17- 11-2023
ಶುಲ್ಕ ಪಾವತಿಗೆ ಕೊನೆ ದಿನ: 18 – 11-2023
ಪಾವತಿ ವಿಧಾನ: ಆನ್‌ಲೈನ್ ಮೂಲಕ

ಆಯ್ಕೆ ಪ್ರಕ್ರಿಯೆ:
ನಿಗದಿ ಪಡಿಸಿದ ದಿನಾಂಕದಂದು ಮೊದಲು ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ನಂತರ ಮುಖ್ಯ ಪರೀಕ್ಷೆ ನಡೆಸಿ ಅಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ವೈವಾ-ವೋಸ್​ ಟೆಸ್ಟ್ ಇಡಲಾಗುತ್ತದೆ.

ಅಧಿಸೂಚನೆ ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ಆನ್‌ಲೈನ್‌: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: karnatakajudiciary.kar.nic.in

Leave a Comment