ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು (IGNOU Recruitment 2023) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು (IGNOU) ಖಾಲಿ ಇರುವ ಜೂನಿಯರ್ ಅಸಿಸ್ಟಂಟ್ , ಟೈಪಿಸ್ಟ್ ಹಾಗೂ ಸ್ಟೆನೋಗ್ರಾಫರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಅರ್ಹ ಮತ್ತು ಆಸಕ್ತರು ಆಹ್ವಾನಿಸಲಾಗಿದೆ. ಅಪ್ಲೈ ಮಾಡುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಗಳನ್ನು ಓದಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.
IGNOU Recruitment 2023 ಅಧಿಸೂಚನೆ ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU)
ಹುದ್ದೆಗಳ ಸಂಖ್ಯೆ: 102
ಹುದ್ದೆ ಹೆಸರು: ಜೂನಿಯರ್ ಅಸಿಸ್ಟಂಟ್ , ಟೈಪಿಸ್ಟ್ ಹಾಗೂ ಸ್ಟೆನೋಗ್ರಾಫರ್
ಉದ್ಯೋಗ ಸ್ಥಳ: ಭಾರತದಾದ್ಯಂತ
ವೇತನ: 19,900 ರಿಂದ 81,100 ರೂ.
ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ:
ಜೂನಿಯರ್ ಅಸಿಸ್ಟಂಟ್ ಮತ್ತು ಟೈಪಿಸ್ಟ್ (ಜೆಎಟಿ) : 50
ಸ್ಟೆನೋಗ್ರಾಫರ್ : 52
ಹುದ್ದೆವಾರು ವೇತನ ಶ್ರೇಣಿ ವಿವರ:
ಜೂನಿಯರ್ ಅಸಿಸ್ಟಂಟ್ ಕಮ್ ಟೈಪಿಸ್ಟ್ (ಜೆಎಟಿ) : 19,900-63200 ರೂ.
ಸ್ಟೆನೋಗ್ರಾಫರ್ : 25500-81100 ರೂ.
ವಿದ್ಯಾರ್ಹತೆ :
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU) ನೇಮಕಾತಿ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ / ಪದವಿ ಪಾಸ್ ಮಾಡಿರಬೇಕು. ಜತೆಗೆ ಟೈಪಿಂಗ್ ಹಾಗೂ ಸ್ಟೆನೋಗ್ರಫಿ ಕೋರ್ಸ್ ಮಾಡಿ ಪಾಸ್ ಆಗಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಹಾಗೂ ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು.
ಹುದ್ದೆವಾರು ವಯೋಮಿತಿ:
ಜೂನಿಯರ್ ಅಸಿಸ್ಟಂಟ್ ಕಮ್ ಟೈಪಿಸ್ಟ್ (ಜೆಎಟಿ) : 18 ರಿಂದ 27 ವರ್ಷ
ಸ್ಟೆನೋಗ್ರಾಫರ್ : 18 ರಿಂದ 30 ವರ್ಷ
ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PWBD (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷ
PWBD [OBC (NCL)] ಅಭ್ಯರ್ಥಿಗಳಿಗೆ: 13 ವರ್ಷ
PWBD (SC/ST) ಅಭ್ಯರ್ಥಿಗಳಿಗೆ: 15 ವರ್ಷ
ಅರ್ಜಿ ಶುಲ್ಕ:
SC/ST/EWS/ಮಹಿಳಾ ಅಭ್ಯರ್ಥಿಗಳಿಗೆ: 600 ರೂ.
UR ಮತ್ತು OBC ಅಭ್ಯರ್ಥಿಗಳಿಗೆ: 1000 ರೂ.
PwBD ಅಭ್ಯರ್ಥಿಗಳಿಗೆ: ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್
ಆಯ್ಕೆ ವಿಧಾನ:
ಎರಡು ಹುದ್ದೆಗಳಿಗೂ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಟೈಪಿಂಗ್ ಪರೀಕ್ಷೆ, ಸ್ಟೆನೋಗ್ರಫಿ ಪರೀಕ್ಷೆ ಕೊನೆಯದಾಗಿ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅಧಿಸೂಚನೆ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 01-12-2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 21-12-2023
ಅರ್ಜಿ ತಿದ್ದುಪಡಿ ಮಾಡಲು ಕೊನೆಯ ದಿನಾಂಕ : 22 ರಿಂದ 25 – 12- 2023 ರವರೆಗೆ.
IGNOU Recruitment 2023 ಅಧಿಸೂಚನೆ ಪ್ರಮುಖ ದಿನಾಂಕಗಳು:
ಅಧಿಕೃತ ವೆಬ್‌ಸೈಟ್ : ignou.ac.in
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ PDF: ಡೌನ್‌ಲೋಡ್ ಮಾಡಲು ಕ್ಲಿಕ್ ಮಾಡಿ