ಹಟ್ಟಿ ಗೋಲ್ಡ್ ಮೈನ್ಸ್ ನಲ್ಲಿ ಉದ್ಯೋಗಾವಕಾಶ | HGML Recruitment 2024 huttigold.co.in

ಹಟ್ಟಿ ಗೋಲ್ಡ್​ ಮೈನ್ಸ್​ ಕಂಪನಿ ಲಿಮಿಟೆಡ್ (HGML Recruitment 2024 ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರು ಕೊನೆಯ ದಿನಾಂಕದೊಳಗೆ ಅಪ್ಲೈ ಮಾಡಬಹುದು.

WhatsApp Group Join Now
Telegram Group Join Now

ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಹಟ್ಟಿ ಗೋಲ್ಡ್​ ಮೈನ್ಸ್​ ಕಂಪನಿ ಲಿಮಿಟೆಡ್ (HGML) ನಲ್ಲಿ ಖಾಲಿ ಇರುವ (ವೈದ್ಯ, ಮಕ್ಕಳ ತಜ್ಞರು) ಫಿಜಿಸಿಯನ್, ಪೀಡಿಯಾಟ್ರಿಕ್ ತಜ್ಞರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್​ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ, ಸಂಪೂರ್ಣ ಓದಿ ಅಪ್ಲೈ ಮಾಡಬಹುದು.

HGML Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:


ನೇಮಕಾತಿ ಪ್ರಾಧಿಕಾರ: ಹಟ್ಟಿ ಗೋಲ್ಡ್​ ಮೈನ್ಸ್​ ಕಂಪನಿ ಲಿಮಿಟೆಡ್ (HGML)
ಹುದ್ದೆ ಹೆಸರು: ವೈದ್ಯ, ಮಕ್ಕಳ ತಜ್ಞರು
ಹುದ್ದೆಗಳ ಸಂಖ್ಯೆ: 02
ಉದ್ಯೋಗ ಸ್ಥಳ: ರಾಯಚೂರ (ಕರ್ನಾಟಕ)
ವೇತನ: 61,900-1,08,900 ರೂ.

ಹುದ್ದೆಯ ವಿವರ:
ವೈದ್ಯ: 01
ಮಕ್ಕಳ ತಜ್ಞರು 01

ಶೈಕ್ಷಣಿಕ ಅರ್ಹತೆ:
ಹಟ್ಟಿ ಗೋಲ್ಡ್​ ಮೈನ್ಸ್​ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಎಂಬಿಬಿಎಸ್, ಎಂಡಿ, ಸ್ನಾತಕೋತ್ತರ ಪದವಿ ಪಡೆದಿರಬೇಕು.

ವಯೋಮಿತಿ:
ಹಟ್ಟಿ ಗೋಲ್ಡ್​ ಮೈನ್ಸ್​ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 40 ವರ್ಷ ಮೀರಿರಬಾರದು.

ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ ಅಧಿಸೂಚನೆ

ಅರ್ಜಿ ಶುಲ್ಕ:
ಎಲ್ಲಾ ಇತರ ಅಭ್ಯರ್ಥಿಗಳು: 500 ರೂ.
SC/ST/Cat-I/Ph.D/ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 300 ರೂ.
ಶುಲ್ಕ ಪಾವತಿಸುವ ವಿಧಾನ: ಡಿಮ್ಯಾಂಡ್ ಡ್ರಾಫ್ಟ್

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಕಾರ್ಯನಿರ್ವಾಹಕ ನಿರ್ದೇಶಕರು
ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್
PO ಹಟ್ಟಿ – 584115 ಕರ್ನಾಟಕ

ಈ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಇತರೆ ಯಾವುದೇ ಸೇವೆಗಳ ಮೂಲಕ ಕೊನೆಯ ದಿನಾಂಕದೊಳಗೆ ಕಳುಹಿಸಬೇಕು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 16-02-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್​- 02- 2024

HGML Recruitment 2024  ಅಧಿಸೂಚನೆ ಲಿಂಕ್‌ಗಳು:

ಅಧಿಸೂಚನೆ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಡೌನ್ಲೋಡ್
ಅಧಿಕೃತ ವೆಬ್‌ಸೈಟ್‌: huttigold.co.in

WhatsApp Group Join Now
Telegram Group Join Now

Leave a Comment