ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG Recruitment 2024) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅಪ್ಲೈ ಮಾಡಬಹುದು.
ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (Comptroller and Auditor General -CAG) ಖಾಲಿ ಇರುವ ಆಡಿಟರ್, ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತರು ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.
CAG Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ | ಕಂಟ್ರೋಲರ್ ಮತ್ತು ಆಡಿಟರ್ ಜನರಲ್ |
ಹುದ್ದೆ ಹೆಸರು | ಆಡಿಟರ್, ಕ್ಲರ್ಕ್ |
ಹುದ್ದೆಗಳ ಸಂಖ್ಯೆ | 211 |
ಉದ್ಯೋಗ ಸ್ಥಳ | ಭಾರತದಾದ್ಯಂತ |
ವೇತನ | 5,200 ರಿಂದ 20,200 ರೂ. |
ಹುದ್ದೆಗಳ ಮಾಹಿತಿ:
ಲೆಕ್ಕಪರಿಶೋಧಕ (ಆಡಿಟರ್) / ಲೆಕ್ಕಾಧಿಕಾರಿ (ಅಕೌಂಟೆಂಟ್): 99
ಗುಮಾಸ್ತ (ಕ್ಲರ್ಕ್)/DEO : 112
ವಿದ್ಯಾರ್ಹತೆ:
ಲೆಕ್ಕಪರಿಶೋಧಕ (ಆಡಿಟರ್) / ಲೆಕ್ಕಾಧಿಕಾರಿ (ಅಕೌಂಟೆಂಟ್): ಪದವಿ
ಗುಮಾಸ್ತ (ಕ್ಲರ್ಕ್)/DEO: 12ನೇ ತರಗತಿ
ವಯೋಮಿತಿ:
ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 27 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಕ್ರೀಡಾಪಟು (UR) ಅಭ್ಯರ್ಥಿಗಳಿಗೆ: 05 ವರ್ಷ
ಕ್ರೀಡಾಪಟು (OBC) ಅಭ್ಯರ್ಥಿಗಳಿಗೆ: 08 ವರ್ಷ
ಕ್ರೀಡಾಪಟು (SC/ST) ಅಭ್ಯರ್ಥಿಗಳಿಗೆ: 10 ವರ್ಷ
ಆಯ್ಕೆ ಪ್ರಕ್ರಿಯೆ:
ಕ್ರೀಡಾ ಪ್ರಯೋಗ
ದೈಹಿಕ ಸಾಮರ್ಥ್ಯ ಪರೀಕ್ಷೆ
ಕೌಶಲ್ಯ ಪರೀಕ್ಷೆ
ದಾಖಲೆ ಪರಿಶೀಲನೆ
ಸಂದರ್ಶನ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಗಳಿಗೆ ಕಳುಹಿಸಬೇಕು.
CAG Recruitment 2024 ಅರ್ಜಿ ಕಳುಹಿಸುವ ವಿಳಾಸಗಳು:
- ಫುಟ್ಬಾಲ್: ಪ್ರಿನ್ಸಿಪಾಲ್ ಅಕೌಂಟೆಂಟ್ ಜನರಲ್ (A&E), ತೆಲಂಗಾಣ, ಸೈಫಾಬಾದ್, ಹೈದರಾಬಾದ್-500004
- ಬ್ಯಾಡ್ಮಿಂಟನ್: ಪ್ರಿನ್ಸಿಪಾಲ್ ಅಕೌಂಟೆಂಟ್ ಜನರಲ್ (A&E)-I, ಕೇರಳ, ತಿರುವನಂತಪುರಂ-695001
- ಕ್ರಿಕೆಟ್: ಪ್ರಿನ್ಸಿಪಾಲ್ ಅಕೌಂಟೆಂಟ್ ಜನರಲ್ (A&E)-I, ಮಹಾರಾಷ್ಟ್ರ, 101, MK ರಸ್ತೆ, IIನೇ ಮಹಡಿ, ಪ್ರತಿಷ್ಠಾ ಭವನ, ನ್ಯೂ ಮೆರೈನ್ ಲೈನ್ಸ್, ಮುಂಬೈ-400020
- ಹಾಕಿ: ಅಕೌಂಟೆಂಟ್ ಜನರಲ್ (A&E)-II, ಒಡಿಶಾ, ಕೇಸರಿ ನಗರ, ಘಟಕ-V, ಭುವನೇಶ್ವರ-751001
- ಟೇಬಲ್ ಟೆನ್ನಿಸ್: ಅಕೌಂಟೆಂಟ್ ಜನರಲ್ (A&E), ಕರ್ನಾಟಕ, ಪಾರ್ಕ್ ಹೌಸ್ ರಸ್ತೆ, PB ನಂ. 5329/5369, ಬೆಂಗಳೂರು-560001
ಪ್ರಮುಖ ದಿನಾಂಕಗಳು:
ಆಫ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 26-12-2023
ಆಫ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-01- 2024
ಅಧಿಸೂಚನೆ ಪ್ರಮುಖ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: cag.gov.in