ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP Recruitment 2024) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತರು ನಿಗದಿತ ದಿನಾಂಕದೊಳಗೆ ಅಪ್ಲೈ ಮಾಡಬಹುದು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ಆರ್.ಸಿ.ಹೆಚ್, ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ತಂಬಾಕು ನಿಯಂತ್ರಣ ಕಾರ್ಯಕ್ರಮ, ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಹಾಗೂ ಅಂಧತ್ವ ನಿವಾರಣಾ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಸ್ಟಾಫ್ ನರ್ಸ್, ಫಾರ್ಮ್ ಸಿಸ್ಟ್, ಲ್ಯಾಬ್, ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನಿಗದಿ ಪಡಿಸಿದ ದಿನಾಂಕದಂದು ಸಂದರ್ಶನಕ್ಕೆ ಹಾಜರಾಗಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.
BBMP Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:
ನೇಮಕಾತಿ ಪ್ರಾಧಿಕಾರ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)
ಹುದ್ದೆ ಹೆಸರು: ಸ್ಟಾಫ್ ನರ್ಸ್, ಫಾರ್ಮ್ ಸಿಸ್ಟ್, ಲ್ಯಾಬ್ ಟೆಕ್ನಿಷಿಯನ್
ಹುದ್ದೆಗಳ ಸಂಖ್ಯೆ: 444
ಉದ್ಯೋಗ ಸ್ಥಳ: ಬೆಂಗಳೂರು (ಕರ್ನಾಟಕ)
ವೇತನ: 14000- 110000 ರೂ.
ಹುದ್ದೆಗಳ ವಿವರ:
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ | ವೇತನ |
ಬಯೋ ಮೆಡಿಕಲ್ ಇಂಜಿನಿಯರ್ | 01 | 40,000 ರೂ. |
ವಲಯ ಕಾರ್ಯಕ್ರಮ ನಿರ್ವಾಹಕರು | 02 | 20,000 ರೂ. |
ಸಾಂಕ್ರಾಮಿಕ ರೋಗಶಾಸ್ತ್ರಜ್ಞ | 01 | 25,000 ರೂ. |
ಪಿ.ಹೆಚ್.ಸಿ.ಓ (ಎ.ಎನ್.ಎಂ) | 154 | 18,523 ರೂ. |
ಹೆಚ್.ಐ.ಓ (ಎಂ.ಹೆಚ್.ಡಬ್ಲ್ಯೂ) | 115 | 18,523 ರೂ. |
ಸ್ಟಾಫ್ ನರ್ಸ | 40 | 18,714 ರೂ. |
ಫಾರ್ಮಾಸಿಸ್ಟ್ | 48 | 18,714 ರೂ. |
ಪ್ರಯೋಗಾಲಯ ತಂತ್ರಜ್ಞ | 05 | 18,714 ರೂ. |
ಓಬಿಜಿ | 04 | 1,10,000 ರೂ. |
ಪಿಡಿಯಾಟ್ರಿಷನ್ | 02 | 1,10,000 ರೂ. |
ಅರಿವಳಿಕೆ ತಜ್ಞ | 02 | 1,10,000 ರೂ. |
ರೆಡಿಯೋಲಾಜಿಸ್ಟ್ | 06 | 1,10,000 ರೂ. |
ವೈದ್ಯ | 05 | 1,10,000 ರೂ. |
ಓಟಿ ಟೆಕ್ನಿಷಿಯನ್ | 01 | 18,714 ರೂ. |
ಆಡಿಯೋಲಾಜಿಸ್ಟ್ | 01 | 30,000 ರೂ. |
ಮೆಡಿಕಲ್ ಆಫೀಸರ್ | 01 | 45,000 ರೂ. |
ಸೀನಿಯರ್ ಟ್ರಿಟಮೆಂಟ್ ಸೂಪರ್ವೈಸರ್ | 02 | 21,000 ರೂ. |
ಲ್ಯಾಬ್ ಟೆಕ್ನೋಲಾಜಿಸ್ಟ್ | 04 | 14,000 ರೂ. |
ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್ | 06 | 17,850 ರೂ. |
ಪ್ಯಾರಾ ಮೆಡಿಕಲ್ ವರ್ಕರ್ | 02 | 16,800 ರೂ. |
ಡಿಸ್ಟ್ರಿಕ್ಟ್ ಕಮ್ಯೂನಿಟಿ ಮೊಬಿಲೈಜರ್ | 01 | 13,136 ರೂ. |
ಓಫ್ಥಲ್ಮೊಲೊಜಿಸ್ಟ್ | 01 | 1,10,000 ರೂ. |
ಕಮ್ಯೂನಿಟಿ ನರ್ಸ್ | 01 | 14,000 ರೂ. |
ಸೈಕಿಯಾಟ್ರಿಕ್ ನರ್ಸ್ | 01 | 14,000 ರೂ. |
BBMP Recruitment 2024 ಶೈಕ್ಷಣಿಕ ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ 10th / ಪಿಯುಸಿ / ಡಿಪ್ಲೊಮ / ಎಂಬಿಬಿಎಸ್ / ಬಿಎಸ್ಸಿ / ನರ್ಸಿಂಗ್ / ಎಂಡಿ / BE / B.Tech / MBA / M.SC / ಹುದ್ದೆವಾರು ಇತರೆ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ನೋಡಿ.
ಹುದ್ದೆವಾರು ವಯೋಮಿತಿ:
- ಓಬಿಜಿ, ಪಿಡಿಯಾಟ್ರಿಷನ್, ಫಿಜಿಷಿಯನ್, ಅನಾಸ್ಥೆಟಿಸ್ಟ್, ರೆಡಿಯೋಲಾಜಿಸ್ಟ್, ಆಡಿಯೋಲಾಜಿಸ್ಟ್, ಮೆಡಿಕಲ್ ಆಫೀಸರ್, ಪ್ಯಾರಾ ಮೆಡಿಕಲ್ ವರ್ಕರ್ :18 – 65 ವರ್ಷ
- ಡಿಸ್ಟ್ರಿಕ್ಟ್ ಕಮ್ಯೂನಿಟಿ ಮೊಬಿಲೈಜರ್: 18 – 50 ವರ್ಷ
- ಬಯೋ ಮೆಡಿಕಲ್ ಇಂಜಿನಿಯರ್, ಜೋನಲ್ ಪ್ರೋಗ್ರಾಮ್ ಮ್ಯಾನೇಜರ್, ಎಪಿಡೆಮಿಯೋಲಾಜಿಸ್ಟ್, ಸ್ಟಾಫ್ ನರ್ಸ, ಓಫ್ಥಲ್ಮೊಲೊಜಿಸ್ಟ್, ಕಮ್ಯೂನಿಟಿ ನರ್ಸ್, ಸೈಕಿಯಾಟ್ರಿಕ್ ನರ್ಸ್: 18 – 45 ವರ್ಷ
- ಪಿ.ಹೆಚ್.ಸಿ.ಓ (ಎ.ಎನ್.ಎಂ), ಹೆಚ್.ಐ.ಓ (ಎಂ.ಹೆಚ್.ಡಬ್ಲ್ಯೂ), ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಓಟಿ ಟೆಕ್ನಿಷಿಯನ್, ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್: 18 – 40 ವರ್ಷ
ಆಯ್ಕೆ ವಿಧಾನ:
ವಾಕ್ ಇನ್ ಇಂಟರ್ವ್ಯೂ (ಸಂದರ್ಶನ) ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ವಾಕ್ ಇನ್ ಇಂಟರ್ವ್ಯೂ (ಸಂದರ್ಶನ) ನಡೆಯುವ ಸ್ಥಳ :
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ಸ್ಥಳ ಡಾ|| ರಾಜ್ ಕುಮಾರ್ ಗಾಜಿನ ಮನೆ, ಬಿಬಿಎಂಪಿ ಕೇಂದ್ರ ಕಛೇರಿ, ಎನ್.ಆರ್.ಚೌಕ, ಬೆಂಗಳೂರು.
ವಾಕ್ ಇನ್ ಪ್ರಕ್ರಿಯೆ ದಿನಾಂಕ:
ವಾಕ್ ಇನ್ ಇಂಟರ್ವ್ಯೂ ನಡೆಯುವ ದಿನಾಂಕ : ಫೆಬ್ರುವರಿ 13, 2024 ರಿಂದ ಫೆಬ್ರುವರಿ 15, 2024 ರವರೆಗೆ.
BBMP Recruitment 2024 ಅಧಿಸೂಚನೆ ಲಿಂಕ್‌ಗಳು:
ಅಧಿಕೃತ ವೆಬ್‌ಸೈಟ್: bbmp.gov.in
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಅರ್ಜಿ ನಮೂನೆ: ಲಿಂಕ್ ಕ್ಲಿಕ್ ಮಾಡಿ